೨ನೆಯ ಹರಿಹರ (1377-1404 ) ವಿಜಯನಗರ ಸಾಮ್ರಾಜ್ಯದ, ಸಂಗಮ ರಾಜವಂಶದ ಚಕ್ರವರ್ತಿ. ಜೈನ ಕನ್ನಡ ಕವಿ ಮಧುರ ಈತನ ಆಸ್ಥಾನ ಕವಿ. ವೇದಗಳ ಪ್ರಮುಖ ಕೆಲಸ ಈತನ ಸಮಯದಲ್ಲಿ ಪೂರ್ಣಗೊಂಡಿತು. ವೈದಿಕ ಮಾರ್ಗ ಸ್ಥಾಪನಾಚರ್ಯ ಮತ್ತು ವೇದಮಾರ್ಗ ಪ್ರವರ್ತಕ ೨ನೆಯ ಹರಿಹರನ ಬಿರುದುಗಳು. == ಜೀವನಚರಿತ್ರೆ == ೧ನೆಯ ಬುಕ್ಕ ರಾಯನ ಮರಣಾನಂತರ, 1377ರಲ್ಲಿ ೨ನೆಯ ಹರಿಹರ ಅಧಿಕಾರಕ್ಕೆ ಬಂದು, 1404ರಲ್ಲಿ ಸಾಯುವ ತನಕ ವಿಜಯನಗರದ ಆಳ್ವಿಕೆ ನಡೆಸಿದನು. ವೀರೂಪಾಕ್ಷ ರಾಯ ಈತನ ಉತ್ತರಾಧಕಾರಿ. ತನ್ನ ಆಳ್ವಿಕೆಯ ಸಮಯದಲ್ಲಿ, ವಿಜಯನಗರವನ್ನು ವಿಸ್ತರಿಸುವುದನ್ನು ಮುಂದುವರಿಸಿದ. ಕೊಂಡವೀಡುವಿನ ರೆಡ್ಡಿಗಳೊಂದಿಗೆ, ನೆಲ್ಲೂರು ಮತ್ತು ಕಳಿಂಗದ ನಡುವಿನ ಆಂಧ್ರ ದ ಪ್ರದೇಶಕ್ಕಾಗಿ ಯುದ್ಧ ಮಾಡಿದನು. ಕೊಂಡವೀಡುವಿನ ರೆಡ್ಡಿಗಳಿಂದ, ಅಡ್ಡಂಕಿ ಮತ್ತು ಶ್ರೀಶೈಲಮ್ ಗಳನ್ನಲ್ಲದೇ, ಕೃಷ್ಣ ನದಿಯ ದಕ್ಷಿಣದ ಪ್ರಸ್ಥಭೂಮಿಯನ್ನೂ ಸಹ ವಶಪಡಿಸಿಕೊಂಡನು. ಈ ಘಟನೆ, ತೆಲಂಗಾಣದಲ್ಲಿನ, ರಚ್ಚಕೊಂಡದ ವೇಲಮರೊಂದಿಗಿನ ಯುದ್ಧಕ್ಕೂ ನಾಂದಿಯಾಯಿತು. 1378ರಲ್ಲಿನ ಮುಝಾಹಿದ್ ಬಹಮನಿಯ ಸಾವನ್ನು ಉಪಯೋಗಿಸಿಕೊಂಡು, ವಾಯವ್ಯದಲ್ಲಿ ತನ್ನ ಹಿಡಿತವನ್ನು ಬಲಗೊಳಿಸಿದನಲ್ಲದೇ, ಗೋವ, ಚೌಲ್ ಮತ್ತು ದಾಭೊಳ್ ಗಳಲ್ಲಿನ ಬಂದರುಗಳನ್ನೂ ವಶಪಡಿಸಿಕೊಂಡನು. ಹರಿಹರ ಆಳ್ವಿಕೆ ರಾಜಧಾನಿ, ವಿಜಯನಗರ ಈಗ ಹೆಚ್ಚು ಜನಪ್ರಿಯವಾಗಿರುವ ಹಂಪಿ. ಹಂಪಿಯ ಅವಶೇಷಗಳಲ್ಲಿ ಹರಿಹರನ ಅರಮನೆಯೂ ಸೇರಿದೆ. ಜೈನ ಶಿಕ್ಷಕ ಸಿಂಹಾನಂದದ ಶಿಷ್ಯ, ಇರುಗುಪ್ಪ ಈತನ ಸೈನ್ಯಾಧಿಕಾರಿಯಾಗಿದ್ದ. ಇರುಗುಪ್ಪ ವಿಜಯನಗರದಲ್ಲಿ, ಗೊಮ್ಮಟೇಶ್ವರನಿಗೆ ಒಂದು ಕೆರೆ ಮತ್ತು ಕುಮ್ತು-ಜೀನಾನಾಥ ಶಿಲ್ಪ ದೇವಾಲಯವನ್ನು ಕಟ್ಟಿಸಿದನು. ಕೊಂಡವೀಡುವಿನ ರೆಡ್ಡಿಗಳೊಂದಿಗಿನ ಹೋರಾಟದಲ್ಲಿ, ಆತ ಮೈಸೂರಿನಲ್ಲಿ, ದಳವಾಯಿಗಳ ವಿರುದ್ಧ ಹೋರಾಡಲು ಯದುರಾಯನನ್ನು ನೇಮಿಸಿ, ಭವಿಷ್ಯದ ಇನ್ನೊಂದು ಪ್ರಬಲ ಸಾಮ್ರಾಜ್ಯದ ಹುಟ್ಟಿಗೆ ಕಾರಣವಾಗುತ್ತಾನೆ. == ಮೂಲಗಳು == , (1981), ( - ) (1st .), ಡಾ . , ಕನ್ಸೈಸ್ ಹಿಸ್ಟರಿ ಆಫ್ ಕರ್ನಾಟಕ, ಎಂಸಿಸಿ, ಬೆಂಗಳೂರು, 2001 (ಮರುಮುದ್ರಣ 2002) == ಬಾಹ್ಯ ಕೊಂಡಿಗಳು == ಆಂಧ್ರ ಪ್ರದೇಶ ಆನ್ಲೈನ್ ೧. ://./----2 ೨. ಕರ್ನಾಟಕದ ಇತಿಹಾಸ